- ವೆಬ್ ಸ್ಟೋರೀಸ್
ಆರೋಗ್ಯಕ್ಕಾಗಿ ಸಿರಿಧಾನ್ಯಗಳು (ಕುಶಲವೇ ಕ್ಷೇಮವೇ)
ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೂ ಆಹಾರ ಬೇಕೇ ಬೇಕು. ಆಹಾರವಿಲ್ಲದೇ ನಮ್ಮ ಬದುಕಿಲ್ಲ. ಆದ್ದರಿಂದ ಆಹಾರ ಬದುಕಿನ ಪ್ರಾಥಮಿಕ ಅವಶ್ಯಕತೆಗಳಲ್ಲಿ ಒಂದಾಗಿದೆ. ಆಹಾರದಿಂದಲೇ ಆರೋಗ್ಯ. ನಾವು ಆಯ್ಕೆ ಮಾಡಿಕೊಳ್ಳುವ ಆಹಾರ ಪದಾರ್ಥಗಳು ಅರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂಬುದು ಈಗಾಗಲೇ ವೈಜ್ಞಾನಿಕವಾಗಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ನಾವು ಯಾವ ರೀತಿಯ ಆಹಾರವನ್ನು ಸೇವಿಸುತ್ತೇವೆಯೋ ಹಾಗೆಯೇ ಇರುತ್ತೇವೆ ಎಂಬ ಮಾತು ಜನಜನಿತವಾಗಿದೆ.
ಧಾನ್ಯಗಳು ನಮ್ಮ ಸಾಂಪ್ರದಾಯಿಕ ಆಹಾರಗಳು. ಹತ್ತಾರು ಸಾವಿರ ವರ್ಷಗಳ ಹಿಂದೆಯೇ ಧಾನ್ಯಗಳನ್ನು ಮಾನವರು ಬೆಳೆಯುತ್ತಿದ್ದರು. ನಮ್ಮ ಪ್ರಾಚೀನ ಕವಿಗಳು ಅಂದಿನ ಕಾಲದ ಆಹಾರಕ್ರಮದ ಬಗ್ಗೆ ಬರೆದಿದ್ದಾರೆ.
ನವಣೆಯನುತಿಂಬುವನು ಹವಣಾಗಿಇರುತಿಹನು ಬವಣಿಗಳಿಗವನು ಒಳಬೀಳನೀ ಮಾತು ಠವಣೆಲ್ಲೆಂದ ಸರ್ವಜ್ಞ|
ರಾಗಿಯನ್ನು ಉಂಬುವ ನಿರೋಗಿಎಂದೆನಿಸುವನು ರಾಗಿಯು ಭೋಗಿಗಳಿಗಲ್ಲ ಬಡವರಿಂ ಗಾಗಿ ಬೆಳೆದಿಹುದು ಸರ್ವಜ್ಞ|
ಧಾನ್ಯ, ಕಿರುಧಾನ್ಯ, ಸಿರಿಧಾನ್ಯ
ಕವಿ ಸರ್ವಜ್ಞನ ಈ ವಚನಗಳಲ್ಲಿ ಧಾನ್ಯ ಎದ್ದುಕಾಣುವುದು. ಆಹಾರ ಪದಾರ್ಥಗಳಲ್ಲಿ ಧಾನ್ಯಗಳೇ ಅತ್ಯಂತ ಹಳೆಯ ಆಹಾರ. ರಾಗಿ, ಜೋಳ, ಸಜ್ಜೆ, ನವಣೆ, ಸಾಮೆ, ಹಾರಕ, ಬರಗು, ಕೊರಲೆ ಇವು ಕೆಲವು ಧಾನ್ಯಗಳು. ಈ ಧಾನ್ಯಗಳ ಕಾಳುಗಳು ಗಾತ್ರದಲ್ಲಿ ಚಿಕ್ಕದಾಗಿರುವುದರಿಂದ ಇವುಗಳನ್ನು ಕಿರುಧಾನ್ಯಗಳು ಎನ್ನುತ್ತಾರೆ. ಅಕ್ಕಿ, ಗೋಧಿ ಮತ್ತು ಜೋಳದ ಹೊರತಾಗಿ ದೊರೆಯುವ ಧಾನ್ಯಗಳೇ ಕಿರುಧಾನ್ಯಗಳು. ಇವುಗಳು ದುಂಡಗೆ ಹಲವು ಬಣ್ಣಗಳಲ್ಲಿವೆ. ಈ ಒಂದೊಂದು ಕಿರುಧಾನ್ಯಕ್ಕೂ ಅದರದ್ದೇ ಆದ ಸ್ವಂತ ರುಚಿಯಿದೆ. ಕೆಲವು ಕಿರುಧಾನ್ಯಗಳು ಸ್ವಲ್ಪ ಸಿಹಿಯಾಗಿದ್ದರೆ ಕೆಲವು ಸ್ವಲ್ಪ ಸಪ್ಪೆಯಾಗಿವೆ. ಇತ್ತೀಚೆಗೆ ಕಿರುಧಾನ್ಯಗಳಿಗೇ ಸಿರಿಧಾನ್ಯಗಳು ಎಂಬ ಹೆಸರೂ ಬಂದಿದೆ. ಸಿರಿ ಎಂದರೆ ಸಂಪತ್ತು. ಧಾನ್ಯ ಎಂದರೆ ಕಾಳುಗಳು. ಒಟ್ಟಾರೆ ಸಿರಿಧಾನ್ಯಗಳೆಂದರೆ ಪೌಷ್ಟಿಕಾಂಶಗಳೆಂಬ ಸಂಪತ್ತು ತುಂಬಿರುವ ಕಾಳುಗಳು.
ಇದನ್ನೂ ಓದಿ: ಪ್ರಕೃತಿ ಚಿಕಿತ್ಸೆ ಎಂದರೇನು?; ನ್ಯಾಚುರೋಪಥಿಯ ಮಹತ್ವ ಮತ್ತು ಉಪಯೋಗಗಳ ಬಗ್ಗೆ ತಿಳಿಯಿರಿ
ಈ ಧಾನ್ಯಗಳ ಬಣ್ಣಗಳಲ್ಲಿ ವ್ಯತ್ಯಾಸವಿದ್ದರೂ ಆಕಾರದಲ್ಲಿ ಸಾಮ್ಯತೆ ಇದೆ. ಕೆಲವು ಸಿರಿಧಾನ್ಯಗಳಲ್ಲಿ ನಾರಿನಂಶ ಹೆಚ್ಚು. ಇನ್ನು ಕೆಲವು ಸಿರಿಧಾನ್ಯಗಳಲ್ಲಿ ಅಕ್ಕಿ, ಗೋಧಿಗಿಂತ ಹತ್ತು ಪಟ್ಟು ಹೆಚ್ಚಿನಕ್ಯಾಲ್ಸಿಯಂ ಮತ್ತು ಇತರ ಖನಿಜಗಳಿರುತ್ತವೆ. ಇಂತಹ ಪ್ರತಿ ಸಿರಿಧಾನ್ಯದ ಸೇವನೆ ಆರೋಗ್ಯಕ್ಕೆ ಉತ್ತಮ .ಇತ್ತೀಚಿನ ಕೆಲವು ಸಂಶೋಧನೆಗಳು ಕೂಡಾ ಸಿರಿಧಾನ್ಯಗಳಿಂದ ಮಾಡಿದ ಆಹಾರ ಆರೋಗ್ಯಕ್ಕೆ ಉತ್ತಮ ಎಂದು ಹೇಳಿವೆ.
ಸಿರಿಧಾನ್ಯಗಳ ಕೃಷಿ
ಇಂದು ಜಗತ್ತಿನಾದ್ಯಂತ ಸಾವಿರಕ್ಕೂ ಮೇಲ್ಪಟ್ಟು ಬೇರೆ ಬೇರೆ ಧಾನ್ಯಗಳನ್ನು ಬೆಳೆಯಲಾಗುತ್ತದೆ. ಈ ಬೆಳೆಗಳನ್ನು ಬೆಳೆಯುವ ದೇಶಗಳಲ್ಲಿ ನಮ್ಮ ಭಾರತ ಅಗ್ರಸ್ಥಾನದಲ್ಲಿದೆ. ಸಿರಿಧಾನ್ಯಗಳ ಕೃಷಿಯು ಕೇವಲ ಸಾಂಪ್ರದಾಯಿಕ ಕೃಷಿಯಲ್ಲ. ಇದೊಂದು ವಿಶೇಷ ಮತ್ತು ವಿಶಿಷ್ಟ ಕೃಷಿಯಾಗಿದೆ. ಈಗೆಲ್ಲಾ ಒಂದು ಪ್ರದೇಶದಲ್ಲಿ ಒಂದೇ ಬೆಳೆಯನ್ನು ಬೆಳೆಯುತ್ತಾರೆ. ಹಿಂದೆಲ್ಲಾ ಒಂದೇ ಕಾಲದಲ್ಲಿ ಒಂದೇ ಪ್ರದೇಶದಲ್ಲಿ ಇಂತಹ ಕನಿಷ್ಠ ಹತ್ತು ಬೆಳೆಗಳನ್ನು ಬೆಳೆಯುತ್ತಿದ್ದರು. ಆಗೆಲ್ಲಾ ಅಕ್ಕಿ, ಗೋಧಿಗಿಂತಲೂ ನವಣೆ, ಸಜ್ಜೆಯ ಸೇವನೆಯೇ ಹೆಚ್ಚಾಗಿತ್ತು. ಮಳೆ ಕಡಿಮೆಯಾಗಲಿ, ಬಿಸಿಲು ಹೆಚ್ಚಾಗಲಿ ಯಾವ ಸಮಯದಲ್ಲಾದರೂ ಸಿರಿಧಾನ್ಯಗಳನ್ನು ಬೆಳೆಯಬಹುದಿತ್ತು.
ಇದನ್ನೂ ಓದಿ: ರಕ್ತಹೀನತೆ ಅಥವಾ ಅನೀಮಿಯಾ ಬಗ್ಗೆ ತಿಳಿದುಕೊಳ್ಳಿ
ಎಲ್ಲಕ್ಕಿಂತ ಮುಖ್ಯವಾಗಿ ಸಿರಿಧಾನ್ಯಗಳನ್ನು ಬೆಳೆಯಲು ಫಲವತ್ತಾದ ಭೂಮಿಯೇ ಬೇಕು ಎಂದಿಲ್ಲ. ತೆಳ್ಳನೆಯ ಮಣ್ಣಿನ ಪದರದ ನೆಲದಲ್ಲಿಯೂ ಸಿರಿಧಾನ್ಯಗಳು ಚೆನ್ನಾಗಿ ಬೆಳೆಯುತ್ತವೆ. ಕಲ್ಲಿನ ಜಮೀನಿನಲ್ಲಿ ಹಾರಕ ಹಾಗೂ ಕೊರಲೆ ಬೆಳೆಯುತ್ತವೆ. ಇಂತಹ ವಿಶಿಷ್ಟ ಗುಣಗಳಿಂದಲೇ ಸಿರಿಧಾನ್ಯಗಳು ರೈತರಿಗೆ ವರದಾನವಾಗಿರುವ ಬೆಳೆಗಳಾಗಿವೆ. ಈ ಧಾನ್ಯಗಳನ್ನು ಬೆಳೆಯಲು ರೈತರು ರಾಸಾಯನಿಕ ಗೊಬ್ಬರವನ್ನು ನೆಚ್ಚಿಕೊಂಡಿಲ್ಲ. ಕೊಟ್ಟಿಗೆ ಗೊಬ್ಬರ, ತರಗೆಲೆ ಗೊಬ್ಬರ ಬಳಸಿ ಸಿರಿಧಾನ್ಯಗಳನ್ನು ಬೆಳೆಯುತ್ತಾರೆ. ಇದರಿಂದ ಹಣ ಉಳಿದಿದೆ ಜೊತೆಗೆ ರಸಗೊಬ್ಬರ ಬಳಸದಿರುವುದರಿಂದ ಕೀಟಗಳ ತೊಂದರೆಯ ಪ್ರಶ್ನೆಯೇ ಇಲ್ಲ. ಹಾಗಾಗಿ ಈ ಬೆಳೆಗಳನ್ನು ಕೀಟಮುಕ್ತ ಬೆಳೆಗಳು ಎನ್ನಬಹುದು. ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸದೇ ಇರುವುದರಿಂದ ಪರಿಸರದ ಮೇಲೂ ಕೆಟ್ಟಪರಿಣಾಮ ಬೀರುವುದಿಲ್ಲ. ಜೊತೆಗೆ ಜನರಿಗೆ ಆಹಾರ ಮತ್ತು ಪಶುಗಳ ಮೇವಿನ ಬೆಳೆಯಾಗಿರುವ ಈ ಧಾನ್ಯಗಳನ್ನು ಬೆಳೆಯಲು ಹೆಚ್ಚಿನ ನೀರು, ಗೊಬ್ಬರ ಮತ್ತು ಆರೈಕೆಯ ಅವಶ್ಯಕತೆ ಇಲ್ಲ. ಮಳೆಯಾಧಾರಿತವಾಗಿ ಹಾಗೂ ಎಲ್ಲಾ ಹವಾಮಾನಕ್ಕೂ ಹೊಂದಿಕೊಂಡು ಬೆಳೆಯುವ ಈ ಧಾನ್ಯಗಳು ನಿಜಕ್ಕೂ ಸಿರಿಧಾನ್ಯಗಳೇ ಆಗಿವೆ.
ಸಿರಿಧಾನ್ಯಗಳಲ್ಲಿ ಪೌಶ್ಟಿಕಾಂಶ
ಈಗ ಅಕ್ಕಿ ಎಂದರೆ ಕೇವಲ ಬತ್ತದ ಅಕ್ಕಿ. ಆದರೆ ಹಿಂದೆ ನವಣಕ್ಕಿ, ಹಾರಕದಕ್ಕಿ, ಸಾಮಕ್ಕಿ, ನೆಲ್ಲಕ್ಕಿ ಹೀಗೆ ಹಲವಾರು ಬಗೆಯ ಅಕ್ಕಿಗಳಿರುತ್ತಿದ್ದವು. ಈ ಸಿರಿಧಾನ್ಯಗಳಿಂದ ಸಿದ್ಧಪಡಿಸಿದ ಅಡಿಗೆಯ ರುಚಿ ಕೂಡ ಹೆಚ್ಚು, ಜೊತೆಗೆ ಇವುಗಳಲ್ಲಿ ಪೌಶ್ಟಿಕಾಂಶಗಳೂ ಹೆಚ್ಚು. ಆದ್ದರಿಂದಲೇ ಈ ಧಾನ್ಯಗಳಿಂದ ತಯಾರಿಸಿದ ಪಾಯಸ, ರೊಟ್ಟಿ, ಮುದ್ದೆ, ಉಂಡೆ ಮುಂತಾದ ಖಾದ್ಯಗಳನ್ನು ಸೇವಿಸಿದರೆ ಬಹಳ ಹೊತ್ತು ಹಸಿವಾಗುತ್ತಿರಲಿಲ್ಲ ಎಂದು ಇಂದಿಗೂ ಅನೇಕ ಹಿರಿಯರು ಹೇಳುತ್ತಾರೆ. ಈ ಸಿರಿಧಾನ್ಯಗಳನ್ನೇ ಸೇವಿಸಿ ಅವರು ಬಹುಕಾಲ ಯಾವುದೇ ರೋಗರುಜಿನಗಳಿಲ್ಲದೇ ಬದುಕುತ್ತಿದ್ದರು ಎಂದು ಹೇಳಲಾಗಿದೆ. ಆದ್ದರಿಂದಲೇ ಇಂದು ಎಷ್ಟೇ ಔಷಧಿ ಸೇವಿಸಿದರೂ ಆರೋಗ್ಯ ಸುಧಾರಿಸದೇ ಇರುವ ಜನಸಮೂಹ ಆರೋಗ್ಯವಂತರಾಗಿ ಬದುಕಬೇಕು ಎಂಬ ಕಾಳಜಿಯಿಂದ ಸಿರಿಧಾನ್ಯಗಳ ಕಡೆ ಮುಖ ಮಾಡಿದೆ. ತಾವು ಬಹಳ ವರ್ಷಗಳಿಂದ ಬಳಸುತ್ತಿದ್ದ, ಗೋಧಿ, ಬಿಳಿ ಅಕ್ಕಿಗೆ ಗೇಟ್‍ಪಾಸ್ ನೀಡಲು ಎಲ್ಲ ವಯಸ್ಸಿನವರೂ ಸಿದ್ಧರಾಗಿದ್ದಾರೆ.
ಸಿರಿಧಾನ್ಯಗಳ ಬಳಕೆ ಮತ್ತು ಪ್ರಾಮುಖ್ಯತೆ
ಪೌಷ್ಟಿಕಾಂಶಗಳ ಸಿರಿಯು ಈ ಧಾನ್ಯಗಳಲ್ಲಿ ಹೆಚ್ಚಾಗಿರುವುದರಿಂದ ಹಲವರಿಗೂ ಸಿರಿಧಾನ್ಯಗಳು ಅಚ್ಚುಮೆಚ್ಚಾಗಿವೆ. ಕೆಲವು ಹೋಟೆಲುಗಳೂ ಸಿರಿಧಾನ್ಯಗಳ ಖಾದ್ಯಗಳನ್ನು ತಯಾರಿಸುತ್ತಿವೆ. ಹಿಂದೆ ಇದ್ದ ಸಿರಿಧಾನ್ಯಗಳು ಬಡವರು ಮತ್ತು ಹಳ್ಳಿ ಜನರಿಗೆ ಮಾತ್ರ ಎಂಬ ಮಾತು ಇಂದು ಬದಲಾಗಿದೆ. ಒಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಜನರಿಗಿಂತ ಹೆಚ್ಚಾಗಿ ನಗರವಾಸಿಗಳು ಸಿರಿಧಾನ್ಯಗಳನ್ನು ಸ್ವಾಗತಿಸಿದ್ದಾರೆ. ನಗರಗಳು, ಪಟ್ಟಣಗಳು ಮತು ಮಹಾನಗರಗಳ ಸಾವಯವ ಕೃಷಿಯ (ಆರ್ಗಾನಿಕ್ ಫಾರ್ಮಿಂಗ್) ಅಂಗಡಿಗಳಲ್ಲಿ ಹಲವು ಬಗೆ ಸಿರಿಧಾನ್ಯಗಳು ಸಿಗುತ್ತಿವೆ.
ಇದನ್ನೂ ಓದಿ: ಮಳೆಗಾಲದಲ್ಲಿ ಆರೋಗ್ಯ ಪೂರಕ ಆಹಾರಗಳು
ಅನ್ನ, ರಾಗಿ, ಗೋಧಿ ಅಷ್ಟೂ ತಿಂದು ಗೊತ್ತಿರುವ ಜನರಿಗೆ ಈಗ ಸಿರಿ ಧಾನ್ಯಗಳನ್ನು ಸವಿಯುವ ಸಂಕ್ರಮಣ ಕಾಲ. ನವಣೆ, ಆರ್ಕ, ಸಾಮೆ, ಊದಲು, ಬರಗು, ಸಜ್ಜೆ, ಕೊರಲು ಹೆಸರೇ ಗೊತ್ತಿಲ್ಲದ ಜನ ಈಗ ಮುಗಿಬಿದ್ದು ಸಿರಿಧಾನ್ಯಗಳ ಖರೀದಿಯಲ್ಲಿ ತೊಡಗಿದ್ದಾರೆ. ಇಂದು ಅನೇಕ ನಗರಗಳಲ್ಲಿ ನಡೆಯುತ್ತಿರುವ ಸಿರಿಧಾನ್ಯ ಮೇಳಗಳಲ್ಲಿ ಜನವೋಜನ. ಸಿರಿಧಾನ್ಯ ಅಡುಗೆ ರೆಸಿಪಿ ಪುಸ್ತಕಗಳಿಗೆ ಎಲ್ಲಿಲ್ಲದ ಬೇಡಿಕೆ. ಸಿರಿಧಾನ್ಯಗಳು ಮಾಲ್‍ಗಳಿಗೂ ಲಗ್ಗೆ ಇಟ್ಟಿವೆ. ಧಾನ್ಯ ಮಾತ್ರವಲ್ಲ, ಹಿಟ್ಟು, ರವೆಗಳೂ ಸಿಗುತ್ತಿವೆ. ಇನ್ನು ಚಕ್ಕುಲಿ, ಹಪ್ಪಳ, ಕೋಡುಬಳೆ, ನಿಪ್ಪಟ್ಟು, ಉಂಡೆ, ಕಜ್ಜಾಯ, ಹೋಳಿಗೆ, ಬರ್ಫಿ ಎಲ್ಲಾ ಬಗೆಯ ಸಿಹಿ ಮತ್ತು ಕುರುಕಲು ತಿಂಡಿಗಳೂ ಸಿರಿಧಾನ್ಯಗಳಲ್ಲಿ ಇಂದು ದೊರಕುತ್ತಿವೆ.
ಸಿರಿಧಾನ್ಯಗಳಲ್ಲಿ ನಾರು ಮತ್ತು ಕಬ್ಬಿಣದ ಅಂಶಗಳು, ಕಾರ್ಬೋಹೈಡ್ರೇಟ್‍ಗಳು ಮತ್ತು ಕೊಬ್ಬಿನಂಶಗಳು ಬೇರೆಯ ಧಾನ್ಯಗಳಿಗೆ ಹೋಲಿಸಿದರೆ ಹೆಚ್ಚಾಗಿವೆ. ಜೊತೆಗೆ ಇವುಗಳಲ್ಲಿ ಶಕ್ತಿಶಾಲಿ ಆಂಟಿಆಕ್ಸಿಡೆಂಟ್ಗಳು ಮತ್ತು ರೋಗ ನಿರೋಧಕ ಶಕ್ತಿ ಇರುವುದರಿಂದ ಪೌಷ್ಟಿಕತೆಯ ಕಣಜಗಳೇ ಆಗಿವೆ. ಅಕ್ಕಿ ಮತ್ತು ಗೋಧಿಗಿಂತ ಐದು ಪಟ್ಟು ಪ್ರೋಟಿನ್, ವಿಟಮಿನ್, ನಾರಿನಂಶ ಹಾಗೂ ಖನಿಜಗಳು ಸಿರಿಧಾನ್ಯಗಳಲ್ಲಿವೆ. ಸಾಮೆ ಮತ್ತು ನವಣೆಗಳು ಪೋಷಕಾಂಶಗಳ ಸಿರಿಗಳೇ ಆಗಿವೆ. ಅದೇ ಅಕ್ಕಿ, ರಾಗಿ ಮತ್ತು ಗೋಧಿ ತಿನ್ನುವುದರ ಬದಲಿಗೆ ವಿವಿಧ ಪೋಷಕಾಂಶಗಳ ಗಣಿಗಳೇ ಆಗಿರುವ ಸಿರಿಧಾನ್ಯಗಳ ಸೇವನೆ ಇಂದು ಆರೋಗ್ಯಕ್ಕಾಗಿ ಅಗತ್ಯವಾಗಿದೆ.
ಡಾ. ವಸುಂಧರಾ ಭೂಪತಿ ಮೊ: 9986840477 ಇ-ಮೇಲ್ : [email protected]
Follow KannadaPrabha channel on WhatsApp
Kannadaprabha news app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ, ಈ ವಿಭಾಗದ ಇತರ ಸುದ್ದಿ.
Advertisement
Balanced Diet : ಸಮತೋಲಿನ ಡಯಟ್ ಹೇಗಿರಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ
Balanced diet : ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ವಿಚಾರಕ್ಕೆ ಬಂದಾಗ ಪೌಷ್ಟಿಕಾಂಶದ ಆಹಾರವನ್ನು ಸೇವಿಸುವುದು ನಮ್ಮ ಮೊದಲ ಆದ್ಯತೆಯಾಗಿರಬೇಕು. ನಮ್ಮ ದೇಹವನ್ನು ಆರೋಗ್ಯವಾಗಿಡಲು ಪರಿಪೂರ್ಣ ಸರಿಯಾದ ಪ್ರಮಾಣದ ಪೋಷಕಾಂಶಗಳನ್ನು ಪಡೆಯುವುದು ಬಹಳ ಮುಖ್ಯ. ಅಂತಹ ಸಮತೋಲಿತ ಆಹಾರವನ್ನು ಹೇಗೆ ಪ್ರಾರಂಭಿಸಬೇಕು ಮತ್ತು ಪೌಷ್ಟಿಕಾಂಶವನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುದರ ಮಾಹಿತಿ ಇಲ್ಲಿದೆ..
Balanced Diet : ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ವಿಚಾರಕ್ಕೆ ಬಂದಾಗ ಪೌಷ್ಟಿಕಾಂಶದ ಆಹಾರವನ್ನು ಸೇವಿಸುವುದು ನಮ್ಮ ಮೊದಲ ಆದ್ಯತೆಯಾಗಿರಬೇಕು. ನಮ್ಮ ದೇಹವನ್ನು ಆರೋಗ್ಯವಾಗಿಡಲು ಪರಿಪೂರ್ಣ
ಸರಿಯಾದ ಪ್ರಮಾಣದ ಪೋಷಕಾಂಶಗಳನ್ನು ಪಡೆಯುವುದು ಬಹಳ ಮುಖ್ಯ. ಅಂತಹ ಸಮತೋಲಿತ ಆಹಾರವನ್ನು ಹೇಗೆ ಪ್ರಾರಂಭಿಸಬೇಕು ಮತ್ತು ಪೌಷ್ಟಿಕಾಂಶವನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುದರ ಮಾಹಿತಿ ಇಲ್ಲಿದೆ.
ವಿವಿಧ ಅಧ್ಯಯನಗಳ ಪ್ರಕಾರ ಆರೋಗ್ಯಕರ, ಪೌಷ್ಟಿಕ ಆಹಾರವನ್ನು ಸೇವಿಸುವುದರಿಂದ ವಿವಿಧ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು. ನಿಯಮಿತ ವ್ಯಾಯಾಮದ ಜೊತೆಗೆ, ಈ ಆಹಾರವು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಪಬ್‌ಮೆಡ್ ಸೆಂಟ್ರಲ್‌ನಲ್ಲಿನ ಅಧ್ಯಯನದ ಪ್ರಕಾರ, ಆರೋಗ್ಯಕರ, ಸಮತೋಲಿತ ಆಹಾರದಲ್ಲಿ ನೀವು ಸೇರಿಸಬೇಕಾದ 5 ಪೋಷಕಾಂಶಗಳ ಕುರಿತು ಇಲ್ಲಿ ತಿಳಿಸಲಾಗಿದೆ.
1. ಉತ್ತಮ ಕೊಬ್ಬು
ಎಲ್ಲಾ ಕೊಬ್ಬುಗಳು ಕೆಟ್ಟದ್ದಲ್ಲ. ಬೇಯಿಸಿದ, ಹುರಿಯದ, ಡೈರಿ ಉತ್ಪನ್ನಗಳಲ್ಲಿನ ಟ್ರಾನ್ಸ್ ಕೊಬ್ಬುಗಳು ಮತ್ತು ಸ್ಯಾಚುರೇಟೆಡ್ ಕೊಬ್ಬುಗಳು ಹಾನಿಕಾರಕ. ಆದರೆ ಸಸ್ಯಜನ್ಯ ಎಣ್ಣೆಗಳು, ಬೀಜಗಳು, ಧಾನ್ಯಗಳು, ಮೊನೊಸಾಚುರೇಟೆಡ್ ಮತ್ತು ಬಹುಅಪರ್ಯಾಪ್ತ ಕೊಬ್ಬುಗಳನ್ನು ಮೀನಿನಿಂದ ಪಡೆಯಲಾಗುತ್ತದೆ. ಬಹುಅಪರ್ಯಾಪ್ತ ಒಮೆಗಾ-3 ಕೊಬ್ಬಿನಾಮ್ಲಗಳು ನಿರ್ದಿಷ್ಟವಾಗಿ ಆರೋಗ್ಯಕರ ಆಹಾರದ ಪ್ರಮುಖ ಅಂಶಗಳಾಗಿವೆ. ಹೃದಯದ ಆರೋಗ್ಯಕ್ಕೂ ಇವು ಅತ್ಯಗತ್ಯ. ಈ ಎರಡು ರೀತಿಯ ಕೊಬ್ಬಿನ ಸೇವನೆಯು ಹೃದಯರಕ್ತನಾಳದ ಕಾಯಿಲೆಗಳು ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.
2. ಕಾರ್ಬೋಹೈಡ್ರೇಟ್ ಗಳು
ನಮ್ಮ ಹೆಚ್ಚಿನ ಕಾರ್ಬೋಹೈಡ್ರೇಟ್ ಸೇವನೆಯು ರೊಟ್ಟಿ ಮತ್ತು ಬ್ರೆಡ್‌ಗಳಿಂದ ಬರುತ್ತದೆ. ಅವುಗಳನ್ನು ಹೆಚ್ಚು ಸಂಸ್ಕರಿಸಿದ ಧಾನ್ಯಗಳಿಂದ ತಯಾರಿಸಲಾಗುತ್ತದೆ. ಕಾರ್ಬೋಹೈಡ್ರೇಟ್ ಅವಶ್ಯಕತೆಗಳು ಆರೋಗ್ಯಕರ ಆಯ್ಕೆಯಾಗಿರುವುದಿಲ್ಲ. ಇವುಗಳ ಬದಲಿಗೆ ಹಣ್ಣುಗಳು, ತರಕಾರಿಗಳು, ಬೀನ್ಸ್ ಮತ್ತು ಧಾನ್ಯಗಳಿಂದ ಮಾಡಿದ ಆಹಾರಗಳು ಒಳ್ಳೆಯದು. ಫೈಬರ್, ಜೀವಸತ್ವಗಳು, ಖನಿಜಗಳು ಮತ್ತು ಫೈಟೊನ್ಯೂಟ್ರಿಯೆಂಟ್‌ಗಳೊಂದಿಗೆ ನಿಧಾನವಾಗಿ ಜೀರ್ಣವಾಗುವ ಕಾರ್ಬೋಹೈಡ್ರೇಟ್‌ಗಳನ್ನು ಅವು ಒದಗಿಸುತ್ತವೆ ಎಂದು ಅಧ್ಯಯನಗಳು ಹೇಳುತ್ತವೆ
3. ಪ್ರೋಟೀನ್
ಪ್ರೋಟೀನ್ ಉತ್ಪಾದನೆಯಲ್ಲಿ ತೊಡಗಿರುವ ಚಯಾಪಚಯ ವ್ಯವಸ್ಥೆಗಳಿಗೆ ಬಂದಾಗ, ಅಮೈನೋ ಆಮ್ಲಗಳು ಪ್ರಾಣಿ ಅಥವಾ ಸಸ್ಯ ಪ್ರೋಟೀನ್‌ನಿಂದ ಬರುತ್ತವೆಯೇ ಎಂಬುದು ಅಪ್ರಸ್ತುತವಾಗುತ್ತದೆ. ಆದ್ದರಿಂದ ಮೊಟ್ಟೆ, ಕೋಳಿ, ಮೀನು ಅಥವಾ ತರಕಾರಿಗಳು, ಬೇಳೆಕಾಳುಗಳ ಮೂಲಕ ಪ್ರೋಟೀನ್ ನಿಮ್ಮ ಆಹಾರದ ಭಾಗವಾಗಿಸಬೇಕು.
4. ಜೀವಸತ್ವಗಳು ಮತ್ತು ಖನಿಜಗಳು
ತರಕಾರಿಗಳು ಮತ್ತು ಹಣ್ಣುಗಳು ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿವೆ. ಆದ್ದರಿಂದ ನಿಮ್ಮ ಆಹಾರದಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ತೆಗೆದುಕೊಳ್ಳಿ. ಆದರೆ ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ನಮ್ಮ ಜೀವನಶೈಲಿಯಲ್ಲಿ ಬದಲಾವಣೆಗಳು ಆಗಿವೆ. ಆದ್ದರಿಂದ ವಿಟಮಿನ್ ಡಿ, ಕಬ್ಬಿಣ, ವಿಟಮಿನ್ ಬಿ ಇತ್ಯಾದಿಗಳಿಗೆ ಕೆಲವು ವಿಟಮಿನ್ ಪೂರಕಗಳನ್ನು ತೆಗೆದುಕೊಳ್ಳಬಹುದು.
ಶುದ್ಧ ತಾಜಾ ನೀರು ದೇಹಕ್ಕೆ ಬಹಳ ಮುಖ್ಯ. H2O ಯಾವುದೇ ಕ್ಯಾಲೊರಿಗಳನ್ನು ಹೊಂದಿರುವುದಿಲ್ಲ. ಹಾಗಾಗಿ ದಿನಕ್ಕೆ 8-10 ಲೋಟ ನೀರು ಕುಡಿಯುವುದು ಒಳ್ಳೆಯದು. ಸೋಡಾಗಳು, ಹಣ್ಣಿನ ಪಾನೀಯಗಳು, ಜ್ಯೂಸ್, ಕ್ರೀಡಾ ಪಾನೀಯಗಳು, ಆಲ್ಕೊಹಾಲ್ಯುಕ್ತ ಪಾನೀಯಗಳಂತಹ ಪಾನೀಯಗಳನ್ನು ತ್ಯಜಿಸಬೇಕು. ಪ್ರತಿದಿನ ಸಕ್ಕರೆ ಪಾನೀಯಗಳನ್ನು ಸೇವಿಸಿದರೆ ತೂಕ ಹೆಚ್ಚಾಗುವುದು. ಟೈಪ್ 2 ಮಧುಮೇಹ, ಹೃದ್ರೋಗ ಮತ್ತು ಕರುಳಿನ ಅಪಾಯವನ್ನು ಹೆಚ್ಚಿಸುತ್ತದೆ. ನಿಮ್ಮ ದೈನಂದಿನ ಆಹಾರದಲ್ಲಿ ಈ ಪೋಷಕಾಂಶಗಳನ್ನು ಸೇರಿಸಿದರೆ ನೀವು ಆರೋಗ್ಯವಾಗಿರಬಹುದು.
ಉತ್ತಮವಾದ ಆರೋಗ್ಯ ಕಾಪಾಡಿಕೊಳ್ಳಲು ಹಣ್ಣು, ತರಕಾರಿ, ಕಾಳುಗಳನ್ನು ಸೇವಿಸಬೇಕು. ದೈಹಿಕ ವ್ಯಾಯಾಮವೂ ಅಗತ್ಯವಾಗಿರುತ್ತದೆ. ಒಂದು ಆರೋಗ್ಯ ಸಮಸ್ಯೆಗಳಿದ್ದರೆ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಮೂಲಕ ಪರಿಹಾರ ಕಂಡುಕೊಳ್ಳಿ.
- News / ಸುದ್ದಿಗಳು
- ಸರ್ಕಾರದ ಯೋಜನೆಗಳು
ನಮ್ಮ ಆಹಾರ ವ್ಯವಸ್ಥೆ | ಆರೋಗ್ಯಕರ ಆಹಾರ ಪದ್ಧತಿನಮ್ಮ ಆಹಾರ ವ್ಯವಸ್ಥೆ | Our Food System Essay In Kannadda | Namma Ahara Paddhati Essay In Kannada
Table of Contents
ಆಹಾರ ವ್ಯವಸ್ಥೆಯು ಚಟುವಟಿಕೆಗಳು ಮತ್ತು ಪ್ರಕ್ರಿಯೆಗಳ ಸಂಕೀರ್ಣ ಜಾಲವಾಗಿದ್ದು ಅದು ನಮ್ಮ ತಟ್ಟೆಗಳಿಗೆ ಸಾಕಣೆಯಿಂದ ಆಹಾರವನ್ನು ತರುತ್ತದೆ. ಇದು ಉತ್ಪಾದನೆ, ಸಂಸ್ಕರಣೆ, ವಿತರಣೆ, ಬಳಕೆ ಮತ್ತು ತ್ಯಾಜ್ಯ ನಿರ್ವಹಣೆಯನ್ನು ಒಳಗೊಂಡಿದೆ. ನಮ್ಮ ಆಹಾರ ವ್ಯವಸ್ಥೆಯು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ, ನಮ್ಮ ಆರೋಗ್ಯ, ಪರಿಸರ ಮತ್ತು ಸಮಾಜದ ಮೇಲೆ ಪ್ರಭಾವ ಬೀರುತ್ತದೆ. ಈ ಪ್ರಬಂಧದಲ್ಲಿ, ನಮ್ಮ ಆಹಾರ ಪದ್ಧತಿಯ ವಿವಿಧ ಅಂಶಗಳನ್ನು ಮತ್ತು ಇಂದಿನ ಜಗತ್ತಿನಲ್ಲಿ ಅದರ ಮಹತ್ವವನ್ನು ನಾವು ಅನ್ವೇಷಿಸುತ್ತೇವೆ.
ಉತ್ಪಾದನೆ: ಆಹಾರದ ಪ್ರಯಾಣವು ಜಮೀನುಗಳಲ್ಲಿ ಪ್ರಾರಂಭವಾಗುತ್ತದೆ, ಅಲ್ಲಿ ಬೆಳೆಗಳನ್ನು ಬೆಳೆಯಲಾಗುತ್ತದೆ ಮತ್ತು ಪ್ರಾಣಿಗಳನ್ನು ಬೆಳೆಸಲಾಗುತ್ತದೆ. ಕೀಟನಾಶಕಗಳು, ರಸಗೊಬ್ಬರಗಳು ಮತ್ತು ಸುಸ್ಥಿರ ಅಭ್ಯಾಸಗಳ ಬಳಕೆ ಸೇರಿದಂತೆ ಉತ್ಪಾದನಾ ವಿಧಾನಗಳು ನಮ್ಮ ಆಹಾರದ ಗುಣಮಟ್ಟ ಮತ್ತು ಸುರಕ್ಷತೆಯ ಮೇಲೆ ಆಳವಾದ ಪ್ರಭಾವವನ್ನು ಬೀರುತ್ತವೆ.
ಸಂಸ್ಕರಣೆ: ಸುಗ್ಗಿಯ ನಂತರ, ಕಚ್ಚಾ ಆಹಾರವು ಸ್ವಚ್ಛಗೊಳಿಸುವಿಕೆ, ಪ್ಯಾಕೇಜಿಂಗ್ ಮತ್ತು ವಿವಿಧ ಆಹಾರ ಉತ್ಪನ್ನಗಳಾಗಿ ರೂಪಾಂತರದಂತಹ ವಿವಿಧ ಪ್ರಕ್ರಿಯೆಗಳಿಗೆ ಒಳಗಾಗುತ್ತದೆ. ಈ ಹಂತವು ಆಹಾರ ಸುರಕ್ಷತೆ, ಶೆಲ್ಫ್ ಜೀವನ ಮತ್ತು ಪ್ರವೇಶವನ್ನು ಖಾತ್ರಿಪಡಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
ವಿತರಣೆ: ಆಹಾರವನ್ನು ನಂತರ ಫಾರ್ಮ್‌ಗಳು ಮತ್ತು ಸಂಸ್ಕರಣಾ ಸೌಲಭ್ಯಗಳಿಂದ ಮಾರುಕಟ್ಟೆಗಳು ಮತ್ತು ಮಳಿಗೆಗಳಿಗೆ ಸಾಗಿಸಲಾಗುತ್ತದೆ, ಇದು ಗ್ರಾಹಕರಿಗೆ ಲಭ್ಯವಾಗುವಂತೆ ಮಾಡುತ್ತದೆ. ಆಹಾರ ವ್ಯರ್ಥವನ್ನು ಕಡಿಮೆ ಮಾಡಲು ಮತ್ತು ಪ್ರತಿಯೊಬ್ಬರೂ ತಾಜಾ ಮತ್ತು ಪೌಷ್ಟಿಕ ಆಹಾರದ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಸಮರ್ಥ ವಿತರಣಾ ಜಾಲಗಳು ಅತ್ಯಗತ್ಯ.
ಬಳಕೆ: ನಮ್ಮ ದೈನಂದಿನ ಆಹಾರದಲ್ಲಿ ನಾವು ಮಾಡುವ ಆಯ್ಕೆಗಳು ನಮ್ಮ ಆರೋಗ್ಯ ಮತ್ತು ಪರಿಸರದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಸಮತೋಲಿತ ಮತ್ತು ವೈವಿಧ್ಯಮಯ ಆಹಾರವನ್ನು ತಿನ್ನುವುದು ನಮ್ಮ ಯೋಗಕ್ಷೇಮಕ್ಕೆ ಒಳ್ಳೆಯದು ಮಾತ್ರವಲ್ಲದೆ ನಮ್ಮ ಆಹಾರ ಸೇವನೆಯ ಪರಿಸರದ ಹೆಜ್ಜೆಗುರುತನ್ನು ಕಡಿಮೆ ಮಾಡುತ್ತದೆ.
ತ್ಯಾಜ್ಯ ನಿರ್ವಹಣೆ: ದುರದೃಷ್ಟವಶಾತ್, ಉತ್ಪಾದಿಸಿದ ಆಹಾರದ ಗಮನಾರ್ಹ ಭಾಗವು ಆಹಾರ ವ್ಯವಸ್ಥೆಯ ವಿವಿಧ ಹಂತಗಳಲ್ಲಿ, ಹೊಲದಿಂದ ತಟ್ಟೆಯವರೆಗೆ ವ್ಯರ್ಥವಾಗುತ್ತದೆ. ಆಹಾರ ತ್ಯಾಜ್ಯವನ್ನು ಪರಿಹರಿಸುವುದು ಪರಿಸರದ ಪ್ರಭಾವವನ್ನು ಕಡಿಮೆ ಮಾಡಲು ಮತ್ತು ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಿರ್ಣಾಯಕವಾಗಿದೆ.
ಆಹಾರದೊಂದಿಗೆ ಆರೋಗ್ಯದ ಕಾಳಜಿ
ನಮ್ಮ ದೇಹವನ್ನು ಆರೋಗ್ಯಕರವಾಗಿರಲು, ನಾವು ಆರೋಗ್ಯಕರ ಆಹಾರವನ್ನು ಸೇವಿಸುವ ಅಭ್ಯಾಸವನ್ನು ಮಾಡಬೇಕು. ಅನಾರೋಗ್ಯಕರ ಆಹಾರವು ಮಾರಣಾಂತಿಕ ಕಾಯಿಲೆಗಳಾದ ಹೃದಯಾಘಾತ, ಅಧಿಕ ಅಥವಾ ಕಡಿಮೆ ರಕ್ತದೊತ್ತಡ, ಹೆಚ್ಚಿದ ಅಥವಾ ಕಡಿಮೆಯಾದ ಗ್ಲೂಕೋಸ್ ಮಟ್ಟ ಇತ್ಯಾದಿಗಳನ್ನು ಸ್ವಾಗತಿಸುತ್ತದೆ. ಇಂದಿನ ಸನ್ನಿವೇಶದಲ್ಲಿ, ಹವಾಮಾನ, ಮಾಲಿನ್ಯ ಇತ್ಯಾದಿಗಳ ವಿಷಯದಲ್ಲಿ ಪ್ರಪಂಚದಾದ್ಯಂತ ಹಲವಾರು ಬದಲಾವಣೆಗಳೊಂದಿಗೆ ಆರೋಗ್ಯಕರ ಆಹಾರವನ್ನು ಸೇವಿಸಬೇಕು.
ನಮ್ಮ ಆಹಾರ ಪದ್ಧತಿಯ ಮಹತ್ವ:
ಆರೋಗ್ಯ: ನಮ್ಮ ಆಹಾರದ ಆಯ್ಕೆಗಳು ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತವೆ. ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರವು ದೀರ್ಘಕಾಲದ ಕಾಯಿಲೆಗಳನ್ನು ತಡೆಗಟ್ಟಲು ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ಪರಿಸರ: ಆಹಾರ ವ್ಯವಸ್ಥೆಯು ಪರಿಸರ ಸಮಸ್ಯೆಗಳಿಗೆ ಪ್ರಮುಖ ಕೊಡುಗೆಯಾಗಿದೆ. ಸುಸ್ಥಿರ ಕೃಷಿ ಪದ್ಧತಿಗಳು, ಕಡಿಮೆಯಾದ ಆಹಾರ ತ್ಯಾಜ್ಯ ಮತ್ತು ಜವಾಬ್ದಾರಿಯುತ ಬಳಕೆ ನಮ್ಮ ಆಹಾರದ ಪರಿಸರದ ಹೆಜ್ಜೆಗುರುತನ್ನು ಕಡಿಮೆ ಮಾಡಬಹುದು.
ಆರ್ಥಿಕತೆ: ಕೃಷಿ ಮತ್ತು ಆಹಾರ ಉದ್ಯಮವು ಆರ್ಥಿಕತೆಯ ಅಗತ್ಯ ಅಂಶಗಳಾಗಿವೆ, ಲಕ್ಷಾಂತರ ಜನರಿಗೆ ಜೀವನೋಪಾಯವನ್ನು ಒದಗಿಸುತ್ತದೆ. ಉತ್ತಮವಾಗಿ ಕಾರ್ಯನಿರ್ವಹಿಸುವ ಆಹಾರ ವ್ಯವಸ್ಥೆಯು ಆರ್ಥಿಕ ಬೆಳವಣಿಗೆ ಮತ್ತು ಸ್ಥಿರತೆಯನ್ನು ಬೆಂಬಲಿಸುತ್ತದೆ.
ಆಹಾರ ಭದ್ರತೆ: ಸುರಕ್ಷಿತ ಮತ್ತು ಪೌಷ್ಟಿಕ ಆಹಾರದ ಪ್ರವೇಶ ಮಾನವ ಮೂಲಭೂತ ಹಕ್ಕು. ನಮ್ಮ ಆಹಾರ ವ್ಯವಸ್ಥೆಯು ಎಲ್ಲರಿಗೂ ಆಹಾರ ಭದ್ರತೆಯನ್ನು ಖಾತ್ರಿಪಡಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ, ವಿಶೇಷವಾಗಿ ಹವಾಮಾನ ಬದಲಾವಣೆ ಮತ್ತು ಜನಸಂಖ್ಯೆಯ ಬೆಳವಣಿಗೆಯಂತಹ ಜಾಗತಿಕ ಸವಾಲುಗಳ ಮುಖಾಂತರ.
ಆರೋಗ್ಯಕರವಾದ ಆಹಾರ ಪದ್ಧತಿಗಳು
ಹಸಿರು ತರಕಾರಿಗಳು : ಅನೇಕ ಜನರು ಹಸಿರು ತರಕಾರಿಗಳನ್ನು ಇಷ್ಟಪಡುವುದಿಲ್ಲ, ಆದರೆ ಕ್ಯಾಲ್ಸಿಯಂ, ಖನಿಜಗಳು, ಆಂಟಿಆಕ್ಸಿಡೆಂಟ್ಗಳು ಇತ್ಯಾದಿಗಳು ಹಸಿರು ತರಕಾರಿಗಳಲ್ಲಿ ಕಂಡುಬರುತ್ತವೆ ಎಂಬುದನ್ನು ಅವರು ಮರೆತುಬಿಡುತ್ತಾರೆ. ಇದು ನಮ್ಮ ದೇಹವನ್ನು ಬೊಜ್ಜು, ಹೃದ್ರೋಗ ಮತ್ತು ಗಂಭೀರ ಕಾಯಿಲೆಗಳಿಂದ ರಕ್ಷಿಸುತ್ತದೆ. ನಮ್ಮ ದೇಹವನ್ನು ಆರೋಗ್ಯವಾಗಿಡಲು, ಇದನ್ನು ದೈನಂದಿನ ಆಹಾರದಲ್ಲಿ ತೆಗೆದುಕೊಳ್ಳಬೇಕು.
ಹಣ್ಣುಗಳು : ತರಕಾರಿಗಳಂತೆ ಹಣ್ಣುಗಳು ಕೂಡ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ. ಮಧುಮೇಹ, ರಕ್ತದೊತ್ತಡ, ಕೊಲೆಸ್ಟ್ರಾಲ್ ಅಥವಾ ತೂಕ ನಷ್ಟಕ್ಕೆ, ಹಣ್ಣುಗಳು ನಿಮಗೆ ಸಹಾಯ ಮಾಡುತ್ತವೆ. ಹಣ್ಣುಗಳಲ್ಲಿ, ಸೇಬು, ಕಿತ್ತಳೆ ಈ ಎರಡೂ ದಿನಚರಿಗಳಲ್ಲಿ ಸೇರಿಸಬೇಕು ಮತ್ತು ಹಣ್ಣುಗಳನ್ನು ಸಮತೋಲಿತ ಪ್ರಮಾಣದಲ್ಲಿ ಸೇವಿಸಬೇಕು ಎಂದು ನೆನಪಿಡಿ. ಇದರಿಂದ ನಮ್ಮ ದೇಹಕ್ಕೆ ಹಾನಿಯಾಗುವುದಿಲ್ಲ.
ಹಾಲು ಅಥವಾ ಡೈರಿ ಉತ್ಪನ್ನಗಳು : ಹಾಲಿನಲ್ಲಿ ಅನೇಕ ರೀತಿಯ ಪೋಷಕಾಂಶಗಳು ಕಂಡುಬರುತ್ತವೆ: ಕ್ಯಾಲ್ಸಿಯಂ, ವಿಟಮಿನ್ ಎ, ವಿಟಮಿನ್ ಬಿ 12, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಸತುವು ಇವೆ, ಇದು ಮೂಳೆಗಳನ್ನು ಬಲಪಡಿಸುತ್ತದೆ.
ಹಣ್ಣಿನ ರಸ : ನೀವು ಯಾವುದೇ ಹಣ್ಣನ್ನು ತಿನ್ನಲು ಬಯಸದಿದ್ದರೆ, ನೀವು ಆ ಹಣ್ಣಿನ ರಸವನ್ನು ತಯಾರಿಸಬಹುದು ಮತ್ತು ಸೇವಿಸಬಹುದು. ಉದಾಹರಣೆಗೆ:- ಮಾವು, ಸೇಬು, ಬಾಳೆಹಣ್ಣು, ಕಬ್ಬು, ಮೋಸಂಬಿ ಇತ್ಯಾದಿ ಹಣ್ಣುಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗಲಿವೆ. ರಸವನ್ನು ತಯಾರಿಸುವ ಮೂಲಕ ನೀವು ಅವುಗಳನ್ನು ಬಳಸಬಹುದು. ಇದರಿಂದ ಹೊಟ್ಟೆಯಲ್ಲಿ ಉಂಟಾಗುವ ಅನೇಕ ರೋಗಗಳು ದೂರವಾಗುತ್ತವೆ. ಜ್ಯೂಸ್ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ.
ಸಾಕಷ್ಟು ನೀರು ಕುಡಿಯುವದು : ನಮ್ಮ ದೇಹದಲ್ಲಿನ ನೀರಿನ ಪ್ರಮಾಣವನ್ನು ಕಡಿಮೆ ಮಾಡಬಾರದು ಏಕೆಂದರೆ ಇದು ಮೂತ್ರಪಿಂಡದ ತೊಂದರೆಗಳು, ಚರ್ಮದ ತೊಂದರೆಗಳು, ವಾಂತಿ, ಜ್ವರ ಮತ್ತು ಇತರ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಸರಿಯಾದ ಪ್ರಮಾಣದ ನೀರಿನೊಂದಿಗೆ ರಕ್ತ ಪರಿಚಲನೆಯೂ ಉತ್ತಮವಾಗಿರುತ್ತದೆ, ಸಾಧ್ಯವಾದಷ್ಟು ನೀರನ್ನು ಕುಡಿಯಬೇಕು
ನಮ್ಮ ಆಹಾರ ವ್ಯವಸ್ಥೆಯಲ್ಲಿನ ಸವಾಲುಗಳು:
ಆಹಾರ ಅಸಮಾನತೆ: ಆಹಾರ ಪ್ರವೇಶ ಮತ್ತು ವಿತರಣೆಯಲ್ಲಿನ ಅಸಮಾನತೆಗಳು ಜಾಗತಿಕ ಕಾಳಜಿಯಾಗಿದೆ. ಅನೇಕ ಜನರು ಇನ್ನೂ ಹಸಿವು ಮತ್ತು ಅಪೌಷ್ಟಿಕತೆಯನ್ನು ಎದುರಿಸುತ್ತಾರೆ, ಆದರೆ ಇತರರು ಹೇರಳವಾದ ಆಹಾರದ ಪ್ರವೇಶವನ್ನು ಹೊಂದಿದ್ದಾರೆ.
ಆಹಾರ ತ್ಯಾಜ್ಯ: ಅಪಾರ ಪ್ರಮಾಣದ ಆಹಾರ ವ್ಯರ್ಥವಾಗುತ್ತದೆ, ಪರಿಸರ ನಾಶ ಮತ್ತು ಆಹಾರ ಅಭದ್ರತೆಗೆ ಕಾರಣವಾಗುತ್ತದೆ. ಹೆಚ್ಚು ಸಮರ್ಥನೀಯ ಆಹಾರ ವ್ಯವಸ್ಥೆಗೆ ಆಹಾರ ತ್ಯಾಜ್ಯವನ್ನು ಪರಿಹರಿಸುವುದು ಅತ್ಯಗತ್ಯ.
ಸಮರ್ಥನೀಯತೆ: ಸಮರ್ಥನೀಯವಲ್ಲದ ಕೃಷಿ ಪದ್ಧತಿಗಳು, ಅರಣ್ಯನಾಶ ಮತ್ತು ಮಿತಿಮೀರಿದ ಮೀನುಗಾರಿಕೆಗಳು ನೈಸರ್ಗಿಕ ಸಂಪನ್ಮೂಲಗಳನ್ನು ಕ್ಷೀಣಿಸುತ್ತಿವೆ ಮತ್ತು ಹವಾಮಾನ ಬದಲಾವಣೆಗೆ ಕೊಡುಗೆ ನೀಡುತ್ತಿವೆ. ಸಮರ್ಥನೀಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ನಿರ್ಣಾಯಕವಾಗಿದೆ.
ಸಂಸ್ಕರಿಸಿದ ಆಹಾರಗಳು: ಹೆಚ್ಚು ಸಂಸ್ಕರಿಸಿದ, ಅನಾರೋಗ್ಯಕರ ಆಹಾರಗಳ ವ್ಯಾಪಕತೆಯು ಆಹಾರ-ಸಂಬಂಧಿತ ರೋಗಗಳ ಜಾಗತಿಕ ಏರಿಕೆಗೆ ಕೊಡುಗೆ ನೀಡುತ್ತದೆ. ಆರೋಗ್ಯಕರ ಆಹಾರ ಆಯ್ಕೆಗಳನ್ನು ಉತ್ತೇಜಿಸುವುದು ಅತ್ಯಗತ್ಯ.
ನಮ್ಮ ಆಹಾರ ವ್ಯವಸ್ಥೆಯು ಆರೋಗ್ಯ, ಪರಿಸರ ಮತ್ತು ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ಜಾಗತಿಕ ಸವಾಲುಗಳ ಹೃದಯಭಾಗದಲ್ಲಿದೆ. ಆಹಾರ ವ್ಯವಸ್ಥೆಯನ್ನು ಹೆಚ್ಚು ಸಮರ್ಥನೀಯ ಮತ್ತು ಸಮಾನವಾಗಿ ಮಾಡುವಲ್ಲಿ ನಾವೆಲ್ಲರೂ ಒಂದು ಪಾತ್ರವನ್ನು ವಹಿಸುವುದು ಬಹಳ ಮುಖ್ಯ. ಇದು ಸ್ಥಳೀಯ ಕೃಷಿಯನ್ನು ಬೆಂಬಲಿಸುವುದು, ಆಹಾರ ತ್ಯಾಜ್ಯವನ್ನು ಕಡಿಮೆ ಮಾಡುವುದು, ಆರೋಗ್ಯಕರ ಆಹಾರದ ಆಯ್ಕೆಗಳನ್ನು ಮಾಡುವುದು ಮತ್ತು ಜನರು ಮತ್ತು ಗ್ರಹದ ಯೋಗಕ್ಷೇಮಕ್ಕೆ ಆದ್ಯತೆ ನೀಡುವ ನೀತಿಗಳಿಗೆ ಸಲಹೆ ನೀಡುವುದನ್ನು ಒಳಗೊಂಡಿರುತ್ತದೆ. ನಮ್ಮ ಆಹಾರ ಆಯ್ಕೆಗಳು ಮತ್ತು ಕ್ರಿಯೆಗಳು ಎಲ್ಲರಿಗೂ ಉತ್ತಮ ಭವಿಷ್ಯವನ್ನು ರೂಪಿಸುವ ಶಕ್ತಿಯನ್ನು ಹೊಂದಿವೆ.
sharathkumar30ym
Leave a reply cancel reply.
Your email address will not be published. Required fields are marked *
Save my name, email, and website in this browser for the next time I comment.
- ಅರೋಗ್ಯ ಅಡುಗೆ
- ಆರೋಗ್ಯ ಆರೈಕೆ
- ಆರೋಗ್ಯ ತಂತ್ರಜ್ಞಾನ
- ಆರೋಗ್ಯ ಶಿಕ್ಷಣ
- ಆರೋಗ್ಯ ಸಲಹೆ
- ಆರೋಗ್ಯ ಸಾಹಿತ್ಯ ಕಥೆ ಕವನ
- ಆಸ್ಪತ್ರೆಗಳು & ವೈದ್ಯರ ಸಾಧನೆ
- ಆಹಾರ ಮತ್ತು ಪೋಷಣೆ
- ಇನ್ಶೂರೆನ್ಸ್ & ಬ್ಯಾಂಕಿಂಗ್
- ಔಷಧ & ಉಪಕರಣಗಳು
- ಕಿಡ್ನಿ ಆರೋಗ್ಯ
- ಕಿವಿ ಮೂಗು ಗಂಟಲು
- ಕುಟುಂಬ & ಸಂಬಂಧ
- ಗಿಡಮೂಲಿಕೆಗಳು, ಸಾಂಬಾರ ಬೆಳೆಗಳು
- ದೈಹಿಕ ಕ್ಷಮತೆ
- ಧರ್ಮ ಆಧ್ಯಾತ್ಮಿಕ ಆರೋಗ್ಯ
- ನೇತ್ರ ಆರೈಕೆ
- ಪರಿಸರ ಆರೋಗ್ಯ
- ಪರ್ಯಾಯ ಚಿಕಿತ್ಸೆ
- ಪಶು, ಸಾಕುಪ್ರಾಣಿಗಳ ಆರೈಕೆ
- ಪ್ರಕೃತಿ ಚಿಕಿತ್ಸೆ
- ಪ್ರಥಮ ಚಿಕಿತ್ಸೆ
- ಮಕ್ಕಳ ಆರೋಗ್ಯ
- ಮಹಿಳಾ ಆರೋಗ್ಯ
- ಮೂಳೆ ಚಿಕಿತ್ಸೆ
- ಲೈಂಗಿಕ ಆರೋಗ್ಯ
- ವಾಣಿಜ್ಯ ಉದ್ಯಮ
- ವೃತ್ತಿ & ಜೀವನ
- ವ್ಯಕ್ತಿತ್ವ ವಿಕಸನ
- ಸಂಶೋಧನೆ – ಮಾಹಿತಿ
- ಸಂಸ್ಕೃತಿ ಸಂಪ್ರದಾಯ
- ಸಾರ್ವಜನಿಕ ಆರೋಗ್ಯ
- ಸಿದ್ಧ ಆರೋಗ್ಯ ಪದ್ಧತಿ
- ಸೌಂದರ್ಯ & ಆರೋಗ್ಯ
- ಹಣ್ಣು & ತರಕಾರಿ
- ಹಿರಿಯ ನಾಗರಿಕರ ಸಮಸ್ಯೆಗಳು
- ಹೃದಯ ಆರೋಗ್ಯ
- ಹೆಲ್ತ್ ಸ್ಟಾರ್ಟಪ್
- ಚಂದಾದಾರರಾಗಿ
ಆಹಾರ ಪದ್ಧತಿ ಮತ್ತು ಆರೋಗ್ಯ
ಆಹಾರದ ಸಾಲಿಗೆ ಸೇರದ, ಆದರೂ ಹಲವರು ಮಕ್ಕಳು ಮತ್ತು ಹಿರಿಯರು ಸೇವಿಸುತ್ತಿರುವ ಕೆಲವು ಪದಾರ್ಥಗಳಿವೆ, ಅವುಗಳಿಂದ ಆದಷ್ಟುದೂರವಿರುವುದು ಮತ್ತು ಮಕ್ಕಳಿಗೆ ತಿನ್ನಲು ಕೊಡದಿರುವುದೇ ಸೂಕ್ತ . ಅವು ಹೀಗಿವೆ: ಕಾಫಿ, ಚಹಾ (ಟೀ), ಬೆಳಿಗ್ಗೆ ಹಾಲಿನ ಜೊತೆ ಸೇರಿಸಿ ಕೂಡಿಸುವ ಅನೈಸರ್ಗಿಕ ಪಾನಿಯಗಳು, ನೈಸರ್ಗಿಕವಲ್ಲದ ತಂಪು ಪಾನಿಯಗಳು (ಕೂಲ್‍ಡ್ರಿಂಕ್ಸ್), ಫಿಜಾ, ನೂಡಲ್ಸ್, ಐಸಕ್ರೀಮ್, ಮೈದಾದಿಂದ ತಯ್ಯಾರಾದ ಬ್ರೇಡ್ಡು ಹಾಗೂ ಬಿಸ್ಕತ್ತು, ಜಾಮ್, ಚಾಕಲೇಟು, ಚಿಪ್ಸ್, ಜಂಕ್‍ದಿಂದ ಕೂಡಿದ ಪದಾರ್ಥ, ಪಾಸ್ಟ್ ಫುಡ್ ಇತ್ಯಾದಿಗಳು. ಅಲ್ಲದೆ ತಂಬಾಕು, ಬೀಡಿ, ಸಿಗರೇಟು, ಮದ್ಯಪಾನ, ಗಂಜಾ, ಮುಂತಾದವುಗಳು ಉತ್ತೇಜಕಗಳಾಗಿ ಈ ಪದಾರ್ಥಗಳು ಕೆಲಸ ಮಾಡುತ್ತವೆಯಾದರೂ ಆಹಾರ ಎಂದು ಕರೆಸಿಕೊಳ್ಳುವ ಯೋಗ್ಯತೆ ಇವಕ್ಕಿಲ್ಲ. ದೇಹಕ್ಕಾಗಲಿ, ಮನಸ್ಸಿಗಾಗಲಿ ದಣಿವಾದಾಗ ಅವುಗಳಿಗೆ ವಿಶ್ರಾಂತಿ ಅವಶ್ಯಕ . ನಾವು ದಣಿದದೇಹಕ್ಕೆ ವಿಶ್ರಾಂತಿ ಕೊಡುವ ಬದಲು ನಮ್ಮ ದುರಾಸೆಯ ಫಲಕ್ಕಾಗಿ ಉತ್ತೇಜಕಗಳನ್ನು ಸೇವಿಸುವ ಮೂಲಕ ಇನ್ನೂ ಹೆಚ್ಚು ಕೆಲಸ ಪ್ರಾಂಭಿಸುತ್ತೇವೆ. ಇದರಿಂದ ವಿಶ್ರಾಂತಿ ಬದಲು ದೇಹಕ್ಕೆ ಇನ್ನಷ್ಟು ಪರಿಶ್ರಮ ಹೇರಿದಂತಾಗುತ್ತದೆ. ಉತ್ತೇಜಕಗಳು ಸತತಅಭ್ಯಾಸ ವ್ಯಸನವಾಗಿ ಪರಿವರ್ತನೆ ಆಗುತ್ತದೆ. ವ್ಯಸಕದ ಮಟ್ಟಕ್ಕೆ ಏರಿದಾಗ ನಾವು ಅವುಗಳ ದಾಸರಾಗಿ ಬಿಡುತ್ತೇವೆ. ಇದು ಅನೈಸರ್ಗಿಕವಾಗಿ ದೇಹ ಮತ್ತು ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಲ್ಪಡುತ್ತದೆ. ಹೀಗೆ ಮುಂದುವರೆಯುತ್ತಾ ಹೋದಂತೆ ದೇಹ ಮತ್ತು ಮನಸ್ಸು ಕಾಯಿಲೆಗಳ ಗೂಡಾಗುತ್ತದೆ. ವ್ಯಕ್ತಿತ್ವವನ್ನೂ ರೂಪಿಸುವಲ್ಲಿ ಆಹಾರದ ಪಾತ್ರ ಬಹು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಆಹಾರದಲ್ಲಿ ಕೆಲವು ವೈವಿದ್ಯಗಳನ್ನಾಗಿ ಈ ಕೆಳಗಿನಂತೆ ವಿಂಗಡಣೆ ಮಾಡಲಾಗಿದೆ.
- ಸಾತ್ತ್ವಿಕ (ಸತ್ವ)
- ರಾಜಸಿಕ (ರಜಸ)
- ತಾಮಸಿಕ (ತಮಸ)
ಸಾತ್ತ್ವಿಕ (ಸತ್ವ) ಆಹಾರ:
- ಆಯುಸ್ಸತ್ವ ಬಲಾರೋಗ್ಯ ಸುಖಪ್ರೀತಿ ವಿವರ್ಧನಾಃ
- ರಸ್ಯಾಃ ಸ್ನಿಗ್ಧಾಃ ಸ್ಥಿರಾ ಹೃದ್ಯಾಆಹಾರಾಃ ಸಾತ್ತ್ವಿಕ ಪ್ರಿಯಾಃ
- ಆಯಸ್ಸು, ಆರೋಗ್ಯ, ಸತ್ವ, ಬಲ, ಪ್ರೀತಿ ಮತ್ತು ಸುಖವನ್ನು ವರ್ಧಿಸುವ ರಸಯುಕ್ತವೂ, ಹೃದಯಕ್ಕೆ ಮುದ ನೀಡುವಆಹಾರವು ಸಾತ್ತ್ವಿಕ ಗುಣವುಳ್ಳ ವ್ಯಕ್ತಿಗೆ ಪ್ರಿಯವಾದುದು ಎನ್ನಲಾಗಿದೆ.
ರಾಜಸಿಕ (ರಜಸ) ಆಹಾರ:
- ಕಟ್ಟಮಲ್ಲವಣಾತ್ಯುಷ್ಣತೀಕ್ಷ್ಣರೂಕ್ಷವಿದಾಹಿನಃ
- ಆಹಾರಾರಾಜಸಸ್ಯೇಷ್ಟಾದುಃಖಶೋಕಾಮಯಪ್ರದಾಃ
- ಅತಿಯಾದ ಕಹಿ, ಹುಳಿ, ಉಪ್ಪು, ಬಿಸಿ, ತೀಕ್ಷ್ಣತೆ ಮತ್ತು ಒಣ ಕಾಲು ಆಹಾರವು ರಾಜಸಗುಣದ ವ್ಯಕ್ತಿಗೆ ಪ್ರಿಯವಾದುದು. ಇಂಥ ಆಹಾರ ದುಃಖ, ಕ್ಲೇಶ ಮತ್ತು ರೋಗಗಳನ್ನು ಹುಟ್ಟಿಸುತ್ತದೆ.
ತಾಮಸಿಕ (ತಮಸ) ಆಹಾರ:
ಸ್ಥೂಲಾಂಶ: ಆಹಾರದ ಸ್ಥೂಲಾಂಶವು ಮಲದ ಮೂಲಕ ಹೊತಕ್ಕೆ ಹೋಗುತ್ತದೆ. ಮಧ್ಯಮಾಂಶ: ಆಹಾರದ ಮಧ್ಯಮಾಂಶವು ರಕ್ತ-ಮೌಂಸಗಳ ಕಣ-ಕಣಗಳಲ್ಲಿ ಸೇರಿ ಶಾರೀರಿಕ ಕ್ರಿಯಾಶೀಲತೆಗೆ ನೆರವಾಗುತ್ತದೆ. ಸೂಕ್ಷ್ಮಾಂಶ: ಆಹಾರದ ಸೂಕ್ಷ್ಮಾಂಶವು ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ನಾವು ಸೇವಿಸುವ ಆಹಾರವು ಶುದ್ಧವಾಗಿಯೂ, ಸತ್ವಯುತವಾಗಿಯೂ ಇರಬೇಕಾದ್ದು ಅಗತ್ಯ. ಆಹಾರ ಪದಾರ್ಥಗಳಲ್ಲಿ ಇವೆರಡೂ ಇರುವುದರಿಂದ ನಾವು ಸೇವಿಸುವ ಆಹಾರ ತಾಜಾ ಮತ್ತು ಶುದ್ಧ ಆಗಿರುವುದು ಉತ್ತಮ.
ಸಸ್ಯಹಾರ ಮತ್ತು ಮಂಸಾಹಾರ:
ಮನುಷ್ಯನ ದೇಹದ ರಚನೆಯನ್ನು ನೋಡಿದರೆ ಅವನಿಗೆ ಸಸ್ಯಹಾರವೇ ಸೂಕ್ತವಾದ ಆಹಾರವಾಗಿದೆ. ಹಲವಾರು ಸಂಶೋಧನೆಗಳ ಪ್ರಕಾರ ಸಸ್ಯಹಾರವೇ ಶ್ರೇಷ್ಠ ಆಹಾರ ಎಂದು ದೃಢಪಟ್ಟಿದೆ. ಒಂದು ದೀರ್ಘಕಾಲದ ಸಂಶೋಧನೆಯಿಂದ ಸಸ್ಯಾಹಾರಿಗಳಿಗೆ ಹೋಲಿಸಿದಾಗ ಮಾಂಸಾಹಾರಿಗಳಲ್ಲಿ ರಕ್ತದೊತ್ತಡ, ಹೃದಯದ ತೊಂದರೆ, ಮಧುಮೇಹ ಇತ್ಯಾದಿ ರೋಗಗಳು ಹೆಚ್ಚಾಗಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಸಸ್ಯಾಹಾರಿಗಳಲ್ಲಿ ನಮಗೆ ನೇರವಾಗಿ ಶಕ್ತಿಯು ಲಭಿಸುತ್ತದೆ. ಮತ್ತು ಸಸ್ಯಾಹಾರದ ಸೇವನೆಯಿಂದ ಜೀರ್ಣಕ್ರಿಯೆಗೆ ತಗಲುವ ಸಮಯ ಮತ್ತು ಶ್ರಮ ಬಹಳಷ್ಟು ಕಡಿಮೆಯಾಗುವುದಲ್ಲದೆ ಸಸ್ಯಾಹಾರದಲ್ಲಿನ ವಿಶೇಷ ಔಷಧೀಯ ಗುಣಗಳು ಕಾಯಿಲೆಯನ್ನು ಶೀಘ್ರ ವಾಸಿಮಾಡಬಲ್ಲದು. ಅಲ್ಲದೇ ರೋಗಿಗಳು ಮಾಂಸಾಹಾರವನ್ನು ತ್ಯಜಿಸುವುದರಿಂದ ಬಹಳ ಬೇಗ ಕಾಯಿಲೆ ಉಪಶಮನವಾಗುವುದು. ನೈತಿಕದೃಷ್ಟಿಯಿಂದ ನೋಡಿದರೂ ಮಾಂಸಾಹಾರವು ಯೋಗ್ಯವಲ್ಲ. ನಮ್ಮ ನಾಲಗೆಯ ಚಪಲಕ್ಕಾಗಿ ಪ್ರಾಣಿಯ ಜೀವ ಹಾನಿಗೆ ನಾವು ಕಾರಣರಾಗುತ್ತೇವೆ. ಮನಃಶಾಂತಿಯನ್ನು, ಆರೋಗ್ಯವನ್ನು ಬಯಸುವವರು ಮಾಂಸಾಹಾರವನ್ನು ಸಂಪೂರ್ಣವಾಗಿ ತ್ಯಜಿಸುವುದು ಒಳ್ಳೆಯದು. ವ್ಯಕ್ತಿಯ ಗುಣಾವಾಗುಣಗಳಿಗೆ ಸೇವಿಸುವ ಆಹಾರವೂ ಕಾರಣವೆಂದು ನಂಬಲಾಗಿದೆ. ‘ತಿನ್ನುವುದು ಏನೆಂದು ನೀನು ಹೇಳು, ಎಂಥವನು ನೀನೆಂದು ನಾ ಹೇಳುವೆ’ ಎನ್ನುವ ನಾಣ್ನುಡಿ ನಮ್ಮ ನಂಬಿಕೆಯನ್ನು ದೃಢಪಡಿಸುತ್ತದೆ.
“ಒಮ್ಮೆಯುಂಡವ ತ್ಯಾಗಿ ಇಮ್ಮೆಯುಂಡವ ಭೋಗಿ ಬಿಮ್ಮಗುಂಡವ ನೆರೆ ರೋಗಿಯೋಗಿತಾ ಸುಮ್ಮಗಿರುತಿಹನು ಸರ್ವಜ್ಞ” ಹೊಟ್ಟೆ ಹಸಿದಾಗ ಮಾತ್ರ ಸೇವಿಸಬೇಕು, ಸೇವಿಸುವಾಗಿ ಸಮಾಧಾನದಿಂದಿರಬೇಕು. ಆಹಾರ ಸೇವಿಸುವಾಗ ಸೇವಿಸುವ ಆಹಾರದ ಕಡೆಗೆ ಗಮನವಿರಬೇಕು. ಬೇಕಾದ್ದನ್ನು ಮಾತ್ರ ತಿನ್ನಬೇಕು, ಬೇಡವಾದುದನ್ನು ತ್ಯಜಿಸಬೇಕು ಮತ್ತು ಆಹಾರವನ್ನು ಸೇವಿಸುವಾಗ ಮನಸ್ಸು ಶಾಂತವಾಗಿರಬೇಕು.
ಸಾಮಾನ್ಯವಾಗಿ ನಾವು ವಾರದ ಏಳು ದಿನಗಳು ಹೊಟ್ಟೆ ತುಂಬಾ ತಿನ್ನುತಲ್ಲಿರುತ್ತೇವೆ. ಆದರೆ ವಾರದಲ್ಲಿ ಒಂದು ಅಥವಾ ತಿಂಗಳಿಗೆ ಒಂದೆರಡು ಬಾರಿಯಾದರೂ ಉಪವಾಸ ಮಾಡುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಇದರಿಂದ ಜೀರ್ಣಾಂಗಗಳಿಗೂ, ಶರೀರಕ್ಕೂ ವಿಶ್ರಾಂತಿ ದೊರಕುತ್ತದೆ. ಸಂಚಿತ ಮಲ ಹೊರದೂಡಲ್ಪಡುತ್ತದೆ, ಬೊಜ್ಜು ಕರಗುವಿಕೆಗೆ, ಮನಃ ಶಾಂತಿಗೆ, ಇಂದ್ರಿಯಗಳ ಮೇಲಿನ ಹತೋಟಿಗೆ ಇದು ನೆರವಾಗಬಲ್ಲದು. ಮತ್ತು ಉಪವಾಸದ ದಿನ ಅತ್ಯಂತ ಶ್ರಮದ ಕೆಲಸಗಳಿಂದ ದೂರವಿರುವುದು ಸೂಕ್ತ. ನೀರು ಅಥವಾ ಹಣ್ಣಿನ ರಸವನ್ನು ಸೇವಿಸಬಹುದು. ನೆನಪಿರಲಿ ಕೆಲವು ಜನ ದೇವರ ಹೆಸರಿನಲ್ಲಿ ವಾರದಲ್ಲಿ ಎರಡು ಅಥವಾ ಮೂರು ದಿನಗಳಿಗೂ ಹೆಚ್ಚು ಕಾಲ ಉಪವಾಸ ಮಾಡುವವರು ಇದ್ದಾರೆ.ಆದರೆ ಇದು ಆರೋಗ್ಯದ ವಿಷಯದಲ್ಲಿ ಒಳ್ಳೆಯದಲ್ಲ. ವಾರದಲ್ಲಿ ಒಂದು ಉಪವಾಸ ಸಾಕು.
ನಾಗರಾಜ್ ಆರ್. ಸಾಲೋಳ್ಳಿ ಭೂಮಿ ಯೋಗ ಫೌಂಡೇಶನ್ ಟ್ರಸ್ಟ್ (ರಿ.) #57, ಗುರುಕುಲ ಶಾಲೆ ಸಮೀಪ, ಓಂ ನಗರ, ಸೇಡಂ ರಸ್ತೆ, ಕಲಬುರಗಿ-585 105 ದೂ. : 9972776062 ಇಮೇಲ್ : [email protected]
IMAGES
VIDEO